Shree Siganduru Choudeshwari Temple

Shree Siganduru Choudeshwari Temple

22488 208 Hindu Temple

9900969405 sigandurchoudamma@gmail.com www.sigandureshwari.com

Sigandooru Shree Chowdamma Temple, Sigandooru. Kalasavalli (V), Thumari (P) Sagara (T), Shivamogga (D)- 577453 Sagar,Karnataka, Shimoga, India - 577453

Is this your Business ? Claim this business

Reviews

Overall Rating
4

208 Reviews

5
100%
4
0%
3
0%
2
0%
1
0%

Write Review

150 / 250 Characters left


Questions & Answers

150 / 250 Characters left


About Shree Siganduru Choudeshwari Temple in Sigandooru Shree Chowdamma Temple, Sigandooru. Kalasavalli (V), Thumari (P) Sagara (T), Shivamogga (D)- 577453 Sagar,Karnataka, Shimoga

ಶ್ರೀ ಸಿಗಂದೂರು ಚೌಡೇಶ್ವರಿ ತಾಯಿ
-
ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇತ್ರಯಂಬಕೆ ದೇವಿ ಸಿಗಂದೂರೇಶ್ವರೀ ನಮೋಸ್ತುತೆ"


ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ಚರಿತ್ರೆ:-

ಅದೊಂದು ದಿನ ಸೀಗೆ ಕಣಿವೆಯ ಪುಣ್ಯ ವಿಶೇಷವಿರಬೇಕು. ಆಗಿನ ಸಮಾಜದ ನಾಯಕರಾಗಿದ್ದ ಶೇಷಪ್ಪನವರು ತನ್ನ ಸಂಗಡಿಗರೊಂದಿಗೆ ಬೇಟೆಯಾಡಲು ಸೀಗೆ ಕಣಿವೆಯ ಅರಣ್ಯದ ಕಡೆ ಉತ್ಸುಕರಾಗಿ ಹೊರಟರು. ಬೆಳೆದು ನಿಂತ ಮರ - ಬಳ್ಳಿ ಪೊದೆಗಳಿಗೆ ಕೊರತೆಯಿಲ್ಲದ ಕಾಡದು. ಹುಲಿ, ಚಿರತೆ, ಕೋಣ ಮತ್ತು ಜಿಂಕೆಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಒಂದು ರೀತಿಯಲ್ಲಿ ಭೀತಿ, ಒಂದು ರೀತಿಯಲ್ಲಿ ಮುದಕೊಡುವ ದಟ್ಟಾರಣ್ಯ. ಶೇಷಪ್ಪನವರು ಸಂಗಡಿಗರ ಜೊತೆ ಸರಿಯಾದ ಭೇಟೆಯನ್ನು ಅರಸುತ್ತಾ ಮುಂದುವರೆಯುತ್ತಿದ್ದಾರೆ. ಮುಂದೆ ಮುಂದೆ ಶೇಷಪ್ಪ, ಹಿಂದೆ ಸಂಗಡಿಗರು. ಇದ್ದಕಿದ್ದ ಹಾಗೆ ಶೇಷಪ್ಪನವರಿಗೂ ಮತ್ತು ಸಂಗಡಿಗರಿಗೂ ಅಂತರ ಹೆಚ್ಚಾಯಿತು. ಇದರ ಅರಿವಿಲ್ಲದೇ ಶೇಷಪ್ಪನವರು ಮುಂದುವರೆಯುತ್ತಿದ್ದಾರೆ. ಇದ್ದಕಿದ್ದ ಹಾಗೆ ಹಿಂತಿರುಗಿ ನೋಡಿದರು. ಸಂಗಡಿಗರು ಯಾರೂ ಕಾಣಿಸಲಿಲ್ಲ. ಹಿಂದೆ ಎಂದೂ ಹೀಗಾಗಿರಲಿಲ್ಲ. ಇಂದೇಕೆ? ಒಂದು ಕ್ಷಣ ತಬ್ಬಿಬ್ಬಾದರು. ಒಂದೆಡೆಯಿಮ್ದ ಹುಲಿಯ ಘರ್ಜನೆಯಾದರೆ, ಇನ್ನೊಂದು ಕಡೆಯಿಂದ ಹುಳ ಹುಪ್ಪಟಗಳ ಶಬ್ಧ. ಬೆಳಕು ಮಂದವಾಗತೊಡಗಿತು.

ಅದೇನೋ ಮಂಪರು... ಏನೂ ಮಾಡಲು ಹೊಳೆಯದಂತಹ ಆಲಸ್ಯ. ಎಂದೂ ಮೂಡದ ಭಯದ ಸೆಳೆವು. ಶೇಷಪ್ಪನವರ ಹೃದಯಾಂತರಾಳದಿಂದ ಮಾತೊಂದು ಹೊರಬಿತ್ತು " ಅಮ್ಮಾ, ತಾಯೇ, ನಾವಾರಿಗೂ ನನಗೆ ತಿಳಿದಂತೆ ಅನ್ಯಾಯ ಎಣಿಸಿಲ್ಲ. ನಿನ್ನನ್ನು ಇದುವರೆಗೆ ನಂಬಿ ಬಾಳಿದೆ. ನನ್ನನ್ನು ಕಾಯುವ ಭಾರ ನಿನ್ನದಮ್ಮ-ನಿನ್ನದು"

ನಿದ್ರೆಯಾವರಿಸಿತು. ನಿದ್ರೆಯಲ್ಲಿ ಕನಸು. ಭೂಮಿ ಬಿರಿಯುವಂತೆ ಗುಡುಗು ಗುಡುಗಿತು. ಸಿಡಿಲು ಸಿಡಿಯಿತು. ಮಿಂಚು ಮಿಂಚಿತು. ವೇದ ನಾದದ ಅಂಗಣ ಹಿತವಾಗಿ ವ್ಯಾಪಿಸಿ ಮಧ್ಯದಲ್ಲೊಂದು ಪ್ರಭೆ ಮೂಡಿತು. ಶಂಖ ಚಕ್ರ ಗಧಾದಾರಿಯಾಗಿ ಮಂದಹಾಸ ಬೀರುತ್ತಾ ನಿಂತಿದ್ದಾಳೆ - ಆದಿಶಕ್ತಿ, ಮಹಾಮಾಯೆ ಲೋಕಮಾತೆ ಸಿಗಂದೂರೇಶ್ವರಿ ರೂಪದಲ್ಲಿ. "ನಾನಿಲ್ಲಿ ನೆಲಸಿ ಧರ್ಮೋದ್ದಾರ - ಭಕ್ತ ಪರಿಪಾಲನೆ ಮಾಡಬೇಕೆಂದು ನಿಶ್ಚಯಿಸಿದ್ದೇನೆ. ಆದರೆ ನೆಲೆ ನಿಲ್ಲಲ್ಲಿ ನನಗೊಂದು ಗುಡಿಬೇಕು. ನಾನು ನೆಲೆನಿಲ್ಲಲು ಗುಡಿಯೊಂದನ್ನು ಕಟ್ಟಿಸು, ನಿತ್ಯ ಪೂಜೆ ನಡೆಯಬೇಕು, ನಾನು ಶಿಲಾರೂಪಿಯಾಗಿ ನೆಲೆಸುತ್ತೇನೆ" ಅಂತ ದೇವಿ ಕನಸಲ್ಲಿ ಶೇಷಪ್ಪನವರಿಗೆ ಹೇಳಿದಳು. ಶೇಷಪ್ಪನವರಿಗೆ ಎಚ್ಚರವಾಯಿತು. ಸುತ್ತ ನೋಡಿದರು. ಕತ್ತಲಾವರಿಸಿದೆ. ಮನೆಯತ್ತ ನಡೆಯತೊಡಗಿದರು.

ದಿನ ಕಳೆದಂತೆ ಶೇಷಪ್ಪನವರ ದಿನಚರಿ ಬದಲಾಯಿತು. ಆಧ್ಯಾತ್ಮದ ಕಡೆ ಒಲವು ಹರಿಯಿತು. ದೇವಿ ಶಿಲಾರೂಪಿಯಾಗಿ ಸೀಗೆ ಕಣಿವೆಯಲ್ಲಿ ನಿಮ್ತಿರುವಳು ಎಂಬುದನ್ನು ಸ್ಥಿರ ಪಡಿಸಿಕೊಂಡರು. ಆದರೆ ಜನರನ್ನು ನಂಬಿಸುರುದೆಂತು? ನೂರಾರು ವರ್ಷ ತಪಸ್ಸನ್ನಾಚರಿಸಿದರೂ ಸಾಧುಸಂತರಿಗೆ ಒಲಿಯದ ದೇವಿ ತನಗೆ ಕನಸ್ಸಲ್ಲಿ ಬಂದು ಅಪ್ಪಣೆ ಕೊಡಿಸಿದಳು ಎಂದರೆ ನಂಬಿಯಾರೆ? ಈ ಚಿಂತೆಯಲ್ಲೇ ಜಲಾವೃತವಾದ ಕಾಡನ್ನು ದಾಟಿ ಒಂಟಿಯಾಗಿ ತಾನು ಕನಸು ಕಂಡ ಸ್ಥಳ ಪರಿಶೀಲಿಸಿದರು. ಅಲ್ಲಿಯೇ ವಿಜೃಂಬಿಸುತ್ತಿದ್ದಳು ತಾಯಿ ಸಿಗಂದೂರೇಶ್ವರಿ. ತಾವು ದೇವಿಗೆ ಪೂಜೆ ಮಾಡಿದರು. ಆದರೂ ತೃಪ್ತಿ ಸಮಾಧಾನವಿಲ್ಲ.
ಭಾವನಾ ಪ್ರಪಂಚದಲ್ಲೇ ತೇಲುತ್ತಿದ್ದ ಅವರ ಚಿತ್ತಭಿತ್ತಿಗೆ ಹೊಳೆದುದೇ ಆಗಮ ದುಗ್ಗಪ್ಪಜ್ಜ.

ದುಗ್ಗಪ್ಪಜ್ಜ ಸಾಧಾರಣ ವ್ಯಕ್ತಿ. ಬ್ರಾಹ್ಮಣರಾದರೂ ವೇದ, ಶಾಸ್ತ್ರ, ಮಂತ್ರ ಓದಿದವರಲ್ಲ. ಕೇವಲ ಶದ್ಧಾ ಭಕ್ತಿಯೇ ಅವರ ಉಸಿರು. ಮುಖದಲ್ಲಿ ಸದಾ ಹರ್ಷ, ಕಣ್ಗಳಲ್ಲಿ ನಿರ್ಮಲತೆ, ಮನಸ್ಸಿನಲ್ಲಿ ಪ್ರೀತಿ, ಮಾತಿನಲ್ಲಿ ಮಾಧುರ್ಯ, ಇವೇ ಅವರನ್ನು ಎಲ್ಲರೂ ಗೌರವಾಧರಗಳಿಂದ ಕಾಣುವಂತೆ ಮಾಡಿತ್ತು. ಶೇಷಪ್ಪನವರು ತಾನು ಕಂಡ ಕನಸಿನ ವಿಚಾರವನ್ನೆಲ್ಲಾ ಸವಿಸ್ತಾರವಾಗಿ ನಿವೇದಿಸಿದರು. ತಾಯಿ ಶೇಷಪ್ಪನವರಿಗೆ ಕನಸ್ಸಲ್ಲಿ ಕಂಡ ವಿಷಯ ಕೇಳಿ ದಂಗಾದ ದುಗ್ಗಪ್ಪಜ್ಜ.
ತಾನು ದೇವಿಗೆ ದೇವಸ್ಥಾನ ಕಟ್ಟಿಸುತ್ತೇನೆ, ನೀವು ನನಗೆ ಮಾರ್ಗದರ್ಶಕರಾಗಬೇಕು. ಹೀಗೆ ಮಾಡು ಅಂತ ಅಪ್ಪಣೆ ಕೊಡಿಸಿ, ಅದರಂತೆ ಮಾಡುತ್ತೇನೆ. ನೀವೆ ಅರ್ಚಕರಾಗಿರಬೇಕು ಅಂತ ಶೇಷಪ್ಪನವರು ದುಗ್ಗಪ್ಪಜ್ಜ ಹತ್ತಿರ ಕೇಳಿಕೊಂಡರು. ಅದಕ್ಕೆ ದುಗ್ಗಪ್ಪಜ್ಜ ಸಮ್ಮತಿಸಿದರು.

ಸಣ್ಣದೊಂದು ಗುಡಿ ನಿರ್ಮಾಣವಾಯಿತು. ದುಗ್ಗಜ್ಜನವರೇ ಅರ್ಚಕರು. ಶೇಷಪ್ಪನವರೇ ಧರ್ಮದರ್ಶಿಗಳು. ಕ್ರಮೇಣ ಸಿಗಂದೂರೇಶ್ವರಿಯ ಖ್ಯಾತಿ ಪಸರಿಸತೊಡಗಿತು. ಭಕ್ತರ ಇಷ್ಟಾರ್ಥಗಳು ಫಲಪ್ರದವಾಗುತ್ತಿತ್ತು. ಭಕ್ತಾದಿಗಳು ಪೂಜೆ ಸಲ್ಲಿಸುತ್ತಿದ್ದರು. ಕಷ್ಟ, ನೋವು, ಬೇನೆ, ಬೇಸರಿಕೆಗಳಿಗಳಿಂದ ಪರಿತಪಿಸುವ ಜನಸಾಮಾನ್ಯ ಭಕ್ತವೃಂದಕ್ಕೆ ಸಂಕ, ತೋಡು ದಾಟಲು ಕಟ್ಟುವ ಸೇತುವೆಗೆ ದಾಟುವಾಗ ಬೀಳದಂತೆ ಹಿಡಿಯಲು ಹಿಡಿಯಾಗುವಂತೆ ದುಗ್ಗಜ್ಜ ಭಕ್ತರ ಹಿಡಿಯಾದರು. ಶೇಷಪ್ಪನವರು ಸೇತುವೆಯಾದರು. ಮಾಳಿಗೆಯ ಮನೆಯಲ್ಲಿ ಒತ್ತಿ ತುಂಬಿಕೊಂಡತಹ ಕತ್ತಲೆಯನ್ನು ಜನರಿಂದ ಹೊರಕ್ಕೆ ತಳ್ಳಿ ನೂಕಲಾಗದು. ಆದರೆ ಒಂದು ದೀಪವನ್ನು ಹೊತ್ತಿಸಿಟ್ಟರೆ ಮುತ್ತಿದ ಕತ್ತಲೆಯು ತಾನೇ ಕಾಲುಕಿತ್ತು ಓಡಿಹೋಗುತ್ತದೆ ಎಂಬಂತೆ ದೀನರಾಗಿ ಬಂದು ಬೇಡುವ ನೊಂದ ಜನರ ಪಾಲಿಗೆ ದುಗ್ಗಜ್ಜ-ಶೇಷಪ್ಪ ನಂದಾದೀಪವಾದರು.

ದುಗ್ಗಜ-ಶೇಷಪ್ಪನವರ ಕಾಲಾನಂತರ ಶ್ರೀದೇವಿಯ ಮೂಲ ವಿಗ್ರಹ ನೀರಿನಲ್ಲಿಯೇ ಮುಳುಗಿರುವುದನ್ನು ನೋಡಿ, ದೇವಿಗೆ ನಿತ್ಯ ಪೂಜೆ ಸಲ್ಲುವಂತಾಗಬೇಕೆಂದು ಯೋಚಿಸಿ ದೇವಸ್ಥಾನವನ್ನು ಈಗಿರುವ ಎತ್ತರದ ಸ್ಥಳಕ್ಕೆ ಶ್ರೇಷ್ಟ ವೈದಿಕ ವೇದೋತ್ತಮರಿಂದ ವಿಧಿವತ್ತಾಗು ಪ್ರತಿಷ್ಟಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಸಿಗಂದೂರೇಶ್ವರಿ ತನ್ನನ್ನು ನಂಬಿದ ಭಕ್ತರನ್ನು ಕೈಬಿಡದೇ ಕಾಯುತ್ತಲೇ ಬಂದಿದ್ದಾಳೆ.

"ಭಗವಾನ್ ಶೀಧರರೂ" ಒಮ್ಮೆ ಸಿಗಂದೂರಿಗೆ ಬಂದಿದ್ದರು. ಆಗ ದೇವಿಯ ಉಗ್ರ ಸ್ವರೂಪಿಯಾಗಿದ್ದಾಳೆಂದು ಶ್ರೀಧರರು ಮೃದುಸ್ವಭಾವದ ಭಕ್ತಪೋಷಣೆಯಾಗಬೇಕೆಂದು ಪ್ರಾರ್ಥಿಸಲು ಒಪ್ಪಿದ ದೇವೆಯು ಅಂದಿನಿಂದ ಸೌಮ್ಯವಾಗಿದ್ದಾಳೆಂದು ಪ್ರತೀತಿ ಇದೆ.

ಯಾವ ಕ್ಷೇತ್ರದಲ್ಲಿಯೂ ಇಲ್ಲದ ವಿಶೇಷತೆ ಸಿಗಂಧೂರಿನಲ್ಲಿ ಕ್ಷೇತ್ರದಲ್ಲಿದೆ. ಕಳ್ಳರಿಂದ ತಮ್ಮ ರಕ್ಷಣೆ ಪಡೆಯಲು ಇಲ್ಲಿ ಬೋರ್ಡ್ ಕೊಡುವ ಪದ್ದತಿಯಿದೆ. ಜಮೀನು, ತೋಟ, ಗದ್ದೆ, ಬೇಣ ಮತ್ತು ಹೊಸ ಕಟ್ಟಡಗಳಿಗಳಲ್ಲಿ ವಸ್ತುಗಳಿಗೆ "ಶೀದೇವಿಯ ರಕ್ಷಣೆ ಇದೆ" ಎಂಬ ಬೋರ್ಡ್ ಹಾಕಿದರೆ ಕಳ್ಳತನವಾಗುವುದಿಲ್ಲ. ಒಂದೊಮ್ಮೆ ಕಳ್ಳನಿಗೆ ಗೊತ್ತಾಗದೇ ಕದ್ದರೂ ಅವನಿಗೆ ತೊಂದರೆಯಾಗಿ ಕದ್ದ ಮಾಲನ್ನು ವಾಪಾಸು ತಂದಿಟ್ಟು ಹೋಗುವನು. ಶಿವಮೊಗ್ಗ ಹಾಗು ಉತ್ತರ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲಿ ಶ್ರೀದೇವಿಯ ರಕ್ಷಣೆಯ ಬೋರ್ಡುಗಳನ್ನು ಕಾಣಬಹುದು

ಶ್ರೀ ದೇವಿಯ ಸನ್ನಿಧಿಯಲ್ಲಿ ನಡೆಯುವ ನಿತ್ಯ ಸೇವಾವಿವರ:

ಅಭಿಷೇಕ
ಪಂಚಾಮೃತ ಪೂಜೆ
ಮಹಾ ಅಭಿಷೇಕ
ಅಲಂಕಾರ ಪೂಜೆ( ವಿವಿಧ ಹೂವುಗಳಿಂದ)
ಮಹಾ ಪೂಜೆ(ಅಭಿಷೇಕ ದಿಂದ ಮಂಗಳಾರತಿವರೆಗೆ)
ಚಂಡಿ ಪಾರಾಯಣ
ಶ್ರೀ ಸೂಕ್ತ ಪಾರಾಯಣ
ಶ್ರೀ ದೇವಿ ಸೂಕ್ತ ಪಾರಾಯಣ
ಇಷ್ಟಾರ್ಥ ಬಗ್ಗೆ ಪ್ರಾರ್ಥನೆ
ಹರಕೆ ಪೂಜೆ
ಅಮವಾಸ್ಯೆ ಪೂಜೆ( ವಿಶೇಷ)
ಚಂಡಿ ಹೋಮ
ಮಂಗಳಾರತಿ ಅಷ್ಟೋತ್ತರ ಕುಂಕುಮ ಅರ್ಚನೆ
ಸಹಸ್ರ ನಾಮ ಕುಂಕುಮ ಅರ್ಚನೆ



ಮಾರ್ಗಸೂಚಿ

ಸಾಗರದಿಂದ ಆವಿನಹಳ್ಳಿ ದಾರಿಯಾಗಿ ಹೊಳೆಬಾಗಿಲುವರೆಗೆ ರಸ್ತೆಯಿದೆ. ಹೊಳೆಬಾಗಿಲಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರು ಎದುರಾಗುತ್ತದೆ. ಇಲ್ಲಿ ಮುಂದೆ ಸೇತುವೆ ಇಲ್ಲ. ಕಡವನ್ನು (Launch/Barge) ಬಳಸಿಕೊಂಡು ಹಿನ್ನೀರನ್ನು ದಾಟಬೇಕಾಗುತ್ತದೆ. ಈ ದಾರಿಯಾಗಿ ಬರುವ ಎಲ್ಲಾ ವಾಹನಗಳಿಗೂ ಈ ಕಡವನ್ನು ಬಳಸುವುದು ಅನಿವಾರ್ಯ.

Sigandooru Chowdeswari temple is located near the river Sharavathi which is located between Sagara & Sigandur,
Godess Chowdeswari is very powerful godess where in prayed honestly gets results positive,
Shree Choudeshwari Temple is in Karnataka State, Shimoga district, Sagara Taluk’s. Prosperous place named Sigandur. Shree Devi kshethra has history of over 300 years. Sigandur kshethra is near to Thumari, 42 KM from sagar town. Mother choudeshwari is called as “Sigandureshwari”.
Every year on the day of “Makara Sankranthi” means 14th & 15th of January Sigandureshwari’s fair going on. On the day of makara sankranthi devotees get bath in holy water in river sharavathi & pray the godess

Distinction Features of Kshethra:------------------------------------------------------------------

Shri choudamma devi has strength to proceed the fear of thiefs. The devotees who carry on benedicts will live happily without any fear of thiefs. If their any thieft taken place in the home of these devotees devi punished them.
Other than Sigandur kshethra no other kshethra has this speciality. Protection from thiefs not only to themselves but also to their gardens, land, buildings, things etc… by putting the board “Shri Deviya Rakshane Ide”. By unknowingly if the thief stolen something from the place where the board is kept thief will definetly face several problems & kep back the things in the same place, is the trust of peoples.
The Kshethra’s Religion head Shri S. Ramappa sir.
Once Varadali Bhagavan Shri Sridharaswamy visited Sigandur. Their Shri Sridharaswamy prayered goddess to change devi from ugraswaroopi to mrudhuswaroopi & Sowyaswaroopi to protect the devotees.
On the right most side of the temple “Bhoothada Katte” is there, lord Veerabhadra is their to guard the Kshethra.
On the left side of the temple Shri Shaneshwara & Shri Raktheshwari Temple is there.
Chief Archaka Shri S.P Sheshagiri Bhat is present in devi’s aradhane


"Annual Festival at Sigandur" :-----------------------------------------------------------------

Annaual Festival (Jathre) is held on Makara Sankranthi day every year. Devotees from different parts of Karnataka visit Singandur Chowdeshwari Temple during the annual festival.

Accommodation is available only at temple premises for limited number of persons only. food is provided by the temple and one private hotels are there, it is recommended that you may need to carry food.

Shree Kshethra’s Development Activity:-------------------------------------------------------

In order to facilitate the devotees many more developmental activities are going on. Everything bacause of mother Choudeshwari grace.
• In Shree Kshethra totally 60 rooms of 2 living homes are constructing
• Dining hall is constructing
• Choultry is constructed for programs such as marreage, meeting, functions etc…
• In Shree Kshethra there is separate bathroom and washroom facility for both male and female is constructed
• Still many development activities are going on

How to get there:-------------------------------------------------------------------------------------:

Road: Sigandur is located in the other side of backwater of river Sharavathi (before Jog falls). To reach Sigandur people have to come to the Taluk headquarters, Sagar. From Sagar, private vehicles or private buses are available to Sigandur. If you are coming by your own vehicle, you need to reach one side of the bank in the river Sharavathi. Launch (ferry) service is available from this bank to the other bank (2 Km). The Launch service is available up to 5.00 PM only. The other side of the river is a small village called Kalasavalli. Sigandur is just 10 Km from this place.

Distance from Sagar:
Bangalore: 350 Km
Mysore: 317 Km
Mangalore: 202 Km
Shimoga: 73 Km
Chitradurga: 188 Km
Davanagere: 132 Km

Route Map from Bangalore to Sigandur:

Bangalore - Tumkur - Tiptur - Arasikere - Kadur - Shimoga - Sagar - Sigandur


Route Map from Mysore to Sigandur:

Mysore - Channarayapattana - Arasikere - Kadur - Shimoga - Sagar - Sigand


'ದೇವಿ ಸ್ಮರಣೆ"

Remember Chowdeshwari Devi always Read Devi Mantra Everyday.Visit Devi Temple,Shiva Parvati Temple,Hanuman Temple at least once a week.Be a devoted devotee of Lord Chowdeshwari Devi. Be good and do good. Aim to practice values embodied by Lord Chowdeshwari. When in Doubt pray to Devi for guidance. Develop mutual respect for others. Show tolerance to people who pray to other forms of God or practice other religions.Keep cleanliness Be Thankful for what you have and try to be content with what you possess.Remember Chowdeshwari Devi always protecting you

*ಈ ಪೇಜ್ ದೇವಸ್ಥಾನದ ಆಡಳಿತ ಮಂಡಳಿಗೆ ಸಂಭಂದ ಪಟ್ಟಿರುವುದಿಲ್ಲ, ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯಿಂದ ಒಳಿತನ್ನು ಕಂಡಿರುವ ಭಕ್ತರಿಂದ ರಚಿಸಲ್ಪಟ್ಟಿರುತ್ತದೆ *

ಧನ್ಯವಾದಗಳು

Popular Business in shimoga By 5ndspot

© 2024 5ndspot. All rights reserved.