Maroli SRI Sooryanarayana Temple

Maroli SRI Sooryanarayana Temple

2311 105 Religious Center

08242439524 www.sntemple@gmail.com www.srisuryanarayanatemple.com

S. N. Temple Road, Mangalore, India - 575008

Is this your Business ? Claim this business

Reviews

Overall Rating
4

105 Reviews

5
100%
4
0%
3
0%
2
0%
1
0%

Write Review

150 / 250 Characters left


Questions & Answers

150 / 250 Characters left


About Maroli SRI Sooryanarayana Temple in S. N. Temple Road, Mangalore

Bank Details

ದೇಣಿಗೆಯನ್ನು ಕಳುಹಿಸುವ ಭಕ್ತಾಧಿಗಳು ಈ ಕೆಳಗಿನ ಖಾತೆಗಳಿಗೆ ಕಳುಹಿಸಬಹುದು
State Bank of Mysore – Pumpwell Branch
A/c No. 64096945514 – IFSC Code – BBNY0040794

Vijaya Bank Alape – Padil Branch
A/c No. 100301011001788- IFSC Code – VIJB0001003

Karnataka Bank Kankanady – Nagori Branch...
A/c No. 4742500101507301 – IFSC Code - KARB0000474

Avail Tax Benefit
Donations made to Sri Suryanarayana Temple Maroli are exempt from Income Tax u/s 80G at the I.T.Act, 1961 in the hands of the donors as per notification of the central government order bearing No.6870 (F.No. 176/51/84-IT(AT) dated 14-8-1986 PAN:AAKTS9998K)

ನಮ್ಮ ಮರೋಳಿ ಸೂರ್ಯನಾರಾಯಣ ದೇವಸ್ಛಾನಕ್ಕೆ ಒಂದು ವಿಷೇಷ ಐತಿಹ್ಯ ಇದೆ. ಆದಿಯಲ್ಲಿ ಇದು ಒಂದು ಗುಹೆ, ಅರಣ್ಯ, ಜಲಚರಗಳಿಂದ ಕೂಡಿದ ಪ್ರಕೃತಿ ರಮಣೀಯ ಪ್ರದೇಶ. ಆ ಸಮಯದಲ್ಲಿ ಮಹಾ ತಪಸ್ವಿ ಋಷಿಹೊಬ್ಬರಿಗೆ ಗೋಲಾಕೃತಿಯೊಂದು ಪ್ರಕಾಶ ರೂಪದಲ್ಲಿ ಕಾಣಿಸಿ, ಶ್ರೀ ಸೂರ್ಯನಾರಾಯಣ ದೇವರ ಆವಿರ್ಭಾವ ಆಯಿತು ಎಂದು ಪ್ರತೀತಿ. ಸಂಸ್ಕ್ರತದಲ್ಲಿ “ಮರಾಲಿ” ಎಂದರೆ ಸಾತ್ವಿಕ-ಸುಂದರ ಎಂದು ಅರ್ಧ. ಮರಾಲ ಋಷಿಯ ಕತೆಯು ಇದೆ.
ಹಿಂದಿನ ಕನ್ನಡ ಲಿಪಿಯಲ್ಲಿ ಈ ಪ್ರದೇಶವನ್ನು ಮರೋಲಿ ಎಂದು ಬರೆದದ್ದಕ್ಕೆ ಆಧಾರ ಇದೆ. ಮರಾಲಿ, ಮರೋಲಿಯಾಗಿ ಈಗ ಮರೋಳಿಯಾಗಿ ಲಿಪಿಯಾಂತರ ಆಗಿರಬಹುದು.
ಕಾಲಾಂತರದಲ್ಲಿ ಇಲ್ಲಿ ಯಾವುದೋ ರಾಜರುಗಳ ನಡುವೆ ಯುದ್ಧವಾಗಿ ಈ ದೇವಸ್ಥಾನ ನಿರ್ನಾಮವಾಯಿತು.
450-500 ವರ್ಷಗಳ ಹಿಂದೆ ಬಜಾಲು ಬೂಡುವಿನಲ್ಲಿ ನೆಲೆಸಿದ್ದ ಪಾಳೆಯಗಾರ್ತಿ ಜೈನ ರಾಣಿಯೊಬ್ಬಳು ಈಗ ಇರುವ ದೇವಸ್ಥಾನವನ್ನು ಕಟ್ಟಿದಳು ಎಂಬುದು ಇತಿಹಾಸ.ಇದಕ್ಕೆ ಕಾರಣ,ದೇವಸ್ಥಾನವೆ ಇಲ್ಲದ ಈಗಿನ ಶೂನ್ಯವಾಗಿದ್ದ ಸ್ಥಳದಲ್ಲಿ ಎರಡು ಗುತ್ತು ಮನೆಯ ಮಾತೆಯರು ಈ ಸ್ಥಳದಲ್ಲಿ ಹಾಯ್ದು ಹೋಗುವ ಸಂದರ್ಭ ಕತ್ತಲಾಯಿತು, ಸುಮಾರು 1200 ವರ್ಷಗಳ ಹಿಂದೆ ತಪಸ್ವಿಗಳಿಂದ ಸ್ಥಾಪನೆಗೊಂಡಿತ್ತು ಎನ್ನಲಾದ ಶ್ರೀ ಸೂರ್ಯನಾರಾಯಣ ಕ್ಷೇತ್ರವು ಕ್ರಿ.ಶ.16ನೆಯ ಶತಮಾನದಲ್ಲಿ ಯುದ್ದ ಮತ್ತು ರಾಜಾಶ್ರಯದ ಕೊರತೆಯಿಂದಾಗಿ ಜೀರ್ಣಾವಸ್ಥೆಯನ್ನು ತಲುಪಿತ್ತು. ಆ ದಿನಗಳಲ್ಲಿ ಮರೋಳಿ, ಕಣ್ಣೂರು , ಜಪ್ಪು,ಅಳಪೆ,ಪದವು , ಬಜಾಲ್ ಮತ್ತು ಕಂಕನಾಡಿ ಇತ್ಯಾದಿ ಏಳು ಮಾಗಣೆಗಳನ್ನು ಹೊಂದಿದ್ದ ಸಂಸ್ಥಾನವೊಂದನ್ನು ಆಳುತ್ತಿದ್ದ ಬಜಾಲ್ ನ ಜೈನ ವಂಶದ ಪಾಳೆಯಗಾರ್ತಿ ಒಬ್ಬಾಕೆ ತನ್ನ ಸಂಸ್ಥಾನದ ಜನರ ತೊಂದರೆಗಳು ನೀಗಬೇಕಾದಲ್ಲಿ ಮಂಗಳೂರಿನ ಏಕೈಕ ಸೀಮೆ ದೇವಸ್ಛಾನ ಮರೋಳಿಯಲ್ಲಿರುವ ಶ್ರೀ ಸೂರ್ಯನಾರಾಯಣ ದೇವರ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯಲೇಬೇಕೆಂದು ಬಲ್ಲವರಿಂದ ಮನಗಂಡು ದೇವಾಲಯವನ್ನು ದುರಸ್ಥಿಗೊಳಿಸಿದಳು. ಹಾಗೇ ತನ್ನ ಸಂಸ್ಥಾನಕ್ಕೆ ಸೇರಿದ ಏಳೂ ಗ್ರಾಮದ ಜನರಿಗೆ ದೇವಸ್ಛಾನದ ಕೆಲಸದಲ್ಲಿ ಕೈಗೂಡಿಸುವಂತೆ ಆಣತಿ ಇತ್ತು ಸುಂದರ ದೇವಸ್ಛಾನವನ್ನು ಕಟ್ಟಿದಳು ಎಂ

ದು ತಿಳಿದುಬರುತ್ತದೆ. ಈ ಜೈನ ರಾಣಿಯರ ಬಗ್ಗೆ ಕಣ್ಣೂರು ಗ್ರಾಮದ ವೈದ್ಯನಾಧ ದೈವದ ಪಾಡ್ದನದಲ್ಲಿ ಉಲ್ಲೇಖವಿದೆ. ಅಂದಿನಿಂದ ಈ ದೇವಾಲಯದ ಕುಂದು ಕೊರತೆಗಳನ್ನು ನೀಗಿಸಿಕೊಡು ಬರುವುದು ಅಂದಿನ ಬಜಾಲ್ ಸಂಸ್ಥಾನಕ್ಕೆ ಸೇರಿದ ಏಳೂ ಗ್ರಾಮಗಳ ಸಮಸ್ತ ನಾಗರಿಕರ ಜವಾಬ್ದಾರಿಯಾಯಿತು ಎಂಬ ಸ್ಥಳ ಐತಿಹ್ಯವಿದೆ.

ಇಂತಹ ಸ್ಥಳ ಪವಿತ್ರ ಎಂದು ರಾಣಿ ತಿಳಿದು ಪುನಃ ದೇವಸ್ಥಾನವನ್ನು ಕಟ್ಟುವಾಗ ಶ್ರೀ ಸೂರ್ಯನಾರಾಯಣ ಮತ್ತು ಶ್ರೀ ಮಹಾಗಣಪತಿ ಎರಡು ವಿಗ್ರಹಗಳನ್ನು ಮಾತ್ರ ಪ್ರತಿಷ್ಟಾಪಿಸಲಾಯಿತು.ದೇವಿಯ ವಿಗ್ರಹ ಬಹುಶಃ ರಾಣಿಯು ಅವಳ ಭವನದಲ್ಲಿ ಪೂಜಿಸುತ್ತಿದ್ದಳು,ಆ ನಂತರ ಆ ವಿಗ್ರಹ ಯಾವುದೋ ಕಾರಣದಿಂದ ನದಿಯಾಳದಲ್ಲಿ ಕಾಲಗರ್ಭಕ್ಕೆ ಸೇರಿತು ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ವಿಚಾರ. ದೇವಾಲಯದ ಆಡಳಿತ ಮತ್ತು ಅಭಿವೃದ್ಧಿಗೆಂದು ಆಕೆ ಸಾಕಷ್ಟು ಆಸ್ತಿಪಾಸ್ತಿಯನ್ನು ಉಂಬಲಿಯಾಗಿತ್ತರೂ ಮುಂದಿನ ಕೆಲ ಶತಮಾನಗಳ ಬಳಿಕ ದೇವಾಲಯದ ಉಸ್ತುವಾರಿಯ ಜವಾಬ್ದಾರಿಯನ್ನು ಹೊತ್ತ ಕೆಲವರ ಮುಂದಾಲೋಚನೆಯ ಕೊರತೆಯಿಂದಾಗಿ ದೇವಾಲಯವು ಹೊಂದಿದ್ದ ಭೂಮಿ ಮತ್ತು ಸಂಪತ್ತು ದೇವಾಲಯದ ಕೈ ತಪ್ಪಿ ಹೋಯಿತು. ಹಾಗಾಗಿ ಸಕಾಲದಲ್ಲಿ ಆಗಬೇಕಿದ್ದ ಅಭಿವೃದ್ಧಿ ಕಾರ್ಯಕ್ರಮದಿಂದಲೂ ದೇವಾಲಯ ವಂಚಿತವಾಯಿತು.
ಒಂದು ಕಾಲದಲ್ಲಿ ಈ ಕ್ಸೇತ್ರವು ತುಂಬ ಶ್ರೀಮಂತ ದೇವಸ್ಛಾನವಾಗಿತ್ತೇಂದು, ಇಲ್ಲಿಂದಲೇ ಕದ್ರಿ ಮುಂತಾದ ಕ್ಸೇತ್ರಗಳಿಗೆ ಜಾತ್ರಾಸಮಯದಲ್ಲಿ ಆಭರಣಾದಿಗಳು ಹೋಗುತ್ತಿದ್ದವು ಎಂದು ಹಿರಿಯರು ತಿಳಿಸುತ್ತಾರೆ. ಹಾಗೇಯೆ ನಮ್ಮಮಂಗಳೂರಿಗೆ ಇದೊಂದೆ ಸೀಮೆ ದೇವಸ್ಛಾನ ಆದ ಕಾರಣ ಶ್ರೀ ಮಂಗಳಾದೇವಿ ದೇವಸ್ಛಾನ ದವರು ಕೂಡಾ ಇಲ್ಲಿಪ್ರಾರ್ಢನೆ ಮಾಡಿ ದೊಡ್ಡ ದೊಡ್ಡ ಕೆಲಸಗಳನ್ನು ಪ್ರಾರಂಭಿಸುತ್ತಿದ್ದರು ಎಂದು ಬಲ್ಲವರಿಂದ ತಿಳಿದುಬರುತ್ತದೆ.

Sri Suryanarayana Temple , Maroli , Mangalore

Category: Temple

Phone: (0824) 2439524

Address: Angelore Church Road, Maroli, Mangalore- 575005

Landmark: Near Angelore Church

Popular Business in mangalore By 5ndspot

© 2024 FindSpot. All rights reserved.